ನೀನಾಸಮ್ ರಂಗಶಿಕ್ಷಣ ಕೇಂದ್ರ
ಬೇಸಿಗೆ ರಂಗತರಬೇತಿ ಶಿಬಿರ – ಏಪ್ರಿಲ್-ಮೇ 2021
 
ಕಳೆದ ಎರಡೂವರೆ ದಶಕಗಳಿಂದ ರಂಗತರಬೇತಿ ನಡೆಸುತ್ತಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರವು ಇದೇ 2021 ಏಪ್ರಿಲ್ 11ರಿಂದ ಮೇ 10ರ ವರೆಗೆ 30 ದಿನಗಳ ರಂಗತರಬೇತಿ ಶಿಬಿರವೊಂದನ್ನು ನಡೆಸುತ್ತಿದೆ. ಈ ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ಮತ್ತು ಅತಿಥಿ ಅಧ್ಯಾಪಕರು ತರಬೇತಿ ನಡೆಸಿಕೊಡುತ್ತಾರೆ.  ರಂಗಮಾಧ್ಯಮದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ವಿಚಾರಗಳ ಬಗ್ಗೆ ಈ ಶಿಬಿರದಲ್ಲಿ ಮಾಹಿತಿಗಳನ್ನು ನೀಡುವ ಜತೆಗೆ ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಈ ಶಿಬಿರವು ರಂಗಭೂಮಿಯನ್ನು ಪ್ರವೇಶಿಸಬಯಸುವ ಹೊಸಬರಿಗೆ ಮತ್ತು ರಂಗಭೂಮಿಯಲ್ಲಿ ಅನುಭವವಿದ್ದು ಅದನ್ನು ಬೆಳೆಸಿಕೊಳ್ಳಲು ಬಯಸುವವರಿಗೆ ಉಪಯುಕ್ತವಾಗುತ್ತದೆ.
 
ಅರ್ಜಿ ಸಲ್ಲಿಸಬಯಸುವವರಿಗೆ ಅಗತ್ಯ ವಿವರಗಳು ಹೀಗಿವೆ:
  • ಆಸಕ್ತ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಇಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು.  ಅಥವಾ ಅರ್ಜಿಯನ್ನು ಈ ಅಂತರ್ಜಾಲತಾಣದಿಂದ ಡೌನ್‍ಲೋಡ್ ಮಾಡಿಕೊಂಡು ಅದನ್ನು ತುಂಬಿ ದಿನಾಂಕ 20 ಮಾರ್ಚ್ 2021ರೊಳಗೆ ತಲುಪುವಂತೆ ಅಂಚೆ ಮೂಲಕ ಕೆಳಗಿರುವ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
  • 18 ರಿಂದ 35 ವರ್ಷದ ನಡುವಿನ ಎಸ್.ಎಸ್.ಎಲ್.ಸಿ.ವರೆಗೆ ಓದಿದ ಯಾರೂ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
  • ರಂಗಭೂಮಿಯಲ್ಲಿ ಗಾಢವಾದ ಆಸಕ್ತಿ ಮತ್ತು ಪ್ರವೇಶ ಇರುವುದು ಅಗತ್ಯ.  ಶಿಬಿರದ ಸಮಯದಲ್ಲಿ ನಡೆಸಲಾಗುವ ಅಭಿನಯ ವ್ಯಾಯಾಮಕ್ಕೆ ಅಗತ್ಯವಾದ ದೈಹಿಕ ಮತ್ತು ಮಾನಸಿಕ ದಾರ್ಢ್ಯತೆ ಇರುವುದು ಅಗತ್ಯ.
  • ಈ ಬಗ್ಗೆ ಸಂದರ್ಶನ ಇರುವುದಿಲ್ಲ.  ಅರ್ಜಿಯ ವಿವರಗಳನ್ನು ಆಧರಿಸಿ ಆಯ್ಕೆ ನಡೆಯುತ್ತದೆ.
  • ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಪ್ರವೇಶ; ಆಯ್ಕೆಯಾದವರಿಗೆ ದಿನಾಂಕ 25 ಮಾರ್ಚ್ 2021ರೊಳಗೆ ಈ-ಮೈಲ್ ಅಥವಾ ವಾಟ್ಸಪ್ ದೂರವಾಣಿ ಮೂಲಕ ತಿಳಿಸಲಾಗುತ್ತದೆ.
  • ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿಬಿರ ಶುಲ್ಕ ಇರುವುದಿಲ್ಲ.  ಆದರೆ, ಶಿಬಿರದ ಅವಧಿಯ ಊಟವಸತಿ ವ್ಯವಸ್ಥೆಯ ಭಾಗಶಃ ವೆಚ್ಚವಾಗಿ ಒಟ್ಟು ರೂ. 8,000ಗಳನ್ನು ಪ್ರತಿಯೊಬ್ಬ ಶಿಬಿರಾರ್ಥಿಯೂ ಪಾವತಿಸಬೇಕು. ನಿಮಗೆ ನಮ್ಮ ಕಡೆಯಿಂದ ಆಯ್ಕೆ ಪತ್ರ ಬಂದ ಮೇಲೆ ನಾವು ತಿಳಿಸುವ ವಿಧಾನದಲ್ಲಿ ಈ ಹಣ ಪಾವತಿಸಬೇಕು.
  • ಶಿಬಿರದಲ್ಲಿ ಪೂರ್ಣಾವಧಿ ಭಾಗವಹಿಸುವುದು ಕಡ್ಡಾಯ.  ಶಿಬಿರದ ನಡುವೆ ಯಾವುದೇ ರಜೆ ನೀಡಲಾಗುವುದಿಲ್ಲ.
 
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 20 ಮಾರ್ಚ್ 2021.  ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದ ಪಕ್ಷದಲ್ಲಿ ಆನ್-ಲೈನ್ ಅರ್ಜಿ ಸೌಲಭ್ಯವನ್ನು ಈ ದಿನಾಂಕಕ್ಕೆ ಮೊದಲೇ ಮುಚ್ಚಲಾಗುತ್ತದೆ.
 
ಸಂಪರ್ಕ ವಿಳಾಸ:
ಸಂಚಾಲಕರು,
ನೀನಾಸಮ್ ರಂಗಶಿಕ್ಷಣ  ಕೇಂದ್ರ,
ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ 577 417.
 
ಮುಖ್ಯವಾಗಿ ಗಮನಿಸಿ:
ಅರ್ಜಿಯಲ್ಲಿ ಸರಿಯಾದ ಈ-ಮೈಲ್ ವಿಳಾಸ ಮತ್ತು ವಾಟ್ಸಪ್ ದೂರವಾಣಿ ಸಂಖ್ಯೆ ಕೊಡುವುದು ಅಗತ್ಯ.  ಇಲ್ಲವಾದರೆ ಅರ್ಜಿಯನ್ನು ಗಮನಿಸಲಾಗುವುದಿಲ್ಲ.