![]()
1. ಕನ್ನಡದಲ್ಲಿ ಮಾಹಿತಿಗಾಗಿ.
2. For English.
ನೀನಾಸಮ್ ಬೇಸಿಗೆ ರಂಗ ತರಬೇತಿ ಶಿಬಿರ
ನೀನಾಸಂ ರಂಗ ಶಿಕ್ಷಣ ಕೇಂದ್ರವು ಕಳೆದ ನಾಲ್ಕು ವರ್ಷಗಳಿಂದ ಬೇಸಿಗೆ ರಂಗ ತರಬೇತಿ ಶಿಬಿರವನ್ನು ನಡೆಸುತ್ತಾ ಬಂದಿದೆ. ಅದರಂತೆ ಈ ವರ್ಷವೂ ಕೂಡ ಮೇ 11 ರಿಂದ ಮೇ 31ರ ವರೆಗೆ ಈ ಶಿಬಿರವು ನಡೆಯಲಿದೆ. ಹಿಂದಿನ ನಾಲ್ಕು ವರ್ಷಗಳ ಶಿಬಿರಗಳಂತೆ ಈ ಶಿಬಿರದಲ್ಲೂ ಕೂಡ ತರಗತಿಗಳು ಮುಖ್ಯವಾಗಿ ನೀನಾಸಂ ರಂಗ ಶಿಕ್ಷಣ ಕೇಂದ್ರದ ನುರಿತ ಅಧ್ಯಾಪಕರುಗಳಿಂದ ನಿರ್ವಹಿಸಲ್ಪಡುತ್ತವೆ. ಈ ಶಿಬಿರದಲ್ಲಿ, ರಂಗಭೂಮಿಯ ಅನೇಕ ಅಂಶಗಳ ಬಗೆಗಿನ ಪ್ರಾಥಮಿಕ ಪ್ರಸ್ತಾವನೆ, ರಂಗ ಧ್ವನಿ, ರಂಗ ಚಲನೆ ಹಾಗೂ ರಂಗ ವಿನ್ಯಾಸದ ಬಗೆಗಿನ ಪ್ರಾಥಮಿಕ ತರಬೇತಿಯನ್ನೂ ನೀಡಲಾಗುವುದು. ಅಲ್ಲದೇ ಈ ಶಿಬಿರದಲ್ಲಿ, ಶಿಬಿರಾರ್ಥಿಗಳಿಂದ ತರಗತಿಯ ತರಬೇತಿಯ ಆಧಾರದ ಮೇಲೆ ಒಂದು ಕಿರು ರಂಗ ಪ್ರದರ್ಶನವನ್ನೂ ಸಹ ಕಲಿಸಿಕೊಡಲಾಗುವುದು ಮತ್ತು ಅದರ ಪ್ರದರ್ಶನ ಶಿಬಿರದ ಕೊನಯ ದಿವಸ ಏರ್ಪಡಿಸಲಾಗುವುದು.
ಈ ಶಿಬಿರವನ್ನು ಈ ಕೆಳಗಿನವರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ:
- ರಂಗಭೂಮಿಯಲ್ಲಿ ಅತೀವ ಆಸಕ್ತಿ ಹೊಂದಿದವರಿಗೆ,
- ರಂಗಭೂಮಿಯಲ್ಲಿ ಮತ್ತು ಇನ್ನಿತರ ಸಾಂಸ್ಕೃತಿಕ ಸಂಘಟನೆಗಳಲ್ಲಿ ಕೆಲಸಮಾಡುತ್ತಾ ಅದರ ಬಗ್ಗೆ ಪ್ರಾಥಮಿಕ ಜ್ಞಾನವನ್ನು ಹೊಂದಿದ್ದು, ರಂಗಭೂಮಿಯಲ್ಲಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಯಸುವವರಿಗೆ
ನೀವು ನೋಂದಾಯಿಸಬಯಸುವಿರಾದರೆ ದಯವಿಟ್ಟು ಕೆಳಕಂಡ ಅಂಶಗಳನ್ನು ಜಾಗರೂಕತೆಯಿಂದ ಓದಿಕೊಳ್ಳಿ:
- ನೀವು ಅರ್ಜಿಯನ್ನು ಆನ್-ಲೈನ್ ಮೂಲಕ ಬೇಕಾದರೂ ಸಲ್ಲಿಸಬಹುದು, ಅಥವಾ ಅರ್ಜಿಯನ್ನು ಡೌನ್-ಲೋಡ್ ಮಾಡಿಕೊಂಡು ಅದನ್ನು ಭರ್ತಿಮಾಡಿ ನೀನಾಸಂನ ವಿಳಾಸಕ್ಕೆ ಪೋಸ್ಟ್ ಮಾಡಬಹುದು.
- ಅಭ್ಯರ್ಥಿಗಳು ಕಡ್ಡಾಯವಾಗಿ 18-35 ವರ್ಷ ವಯಸ್ಸಿನೊಳಗಿರಬೇಕು ಮತ್ತು ಎಸ್.ಎಸ್.ಎಲ್.ಸಿ. ಕೋರ್ಸನ್ನು ಮುಗಿಸಿರಬೇಕು.
- ರಂಗಭೂಮಿಯಲ್ಲಿ ನಿಮಗಿರುವ ತೀರ್ವತರವಾದ ಆಸಕ್ತಿಯೇ ನಮಗೆ ಬೇಕಾದ ವಿದ್ಯಾರ್ಹತೆ ಮತ್ತು ಅಭ್ಯರ್ಥಿಗಳು ಕಠಿಣ ಅಭ್ಯಾಸಕ್ಕೆ ತಕ್ಕುದಾದ ದೇಹವನ್ನು ಹೊಂದಿರಬೇಕು.
- ಅಭ್ಯರ್ಥಿಗಳ ಆಯ್ಕೆಗೆ ಯಾವ ಸಂದರ್ಶನವೂ ಇರುವುದಿಲ್ಲ ಮತ್ತು ನಿಮ್ಮ ಅರ್ಜಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
- ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಗೂ 2013 ಏಪ್ರಿಲ್ 30ರ ಒಳಗಾಗಿ ಈ-ಮೇಲ್ ಅಥವಾ ಅಂಚೆ ಪತ್ರದ ಮೂಲಕ ವಿಷಯವನ್ನು ತಿಳಿಸಲಾಗುವುದು.
- ಶಿಬಿರಕ್ಕೆ ಯಾವುದೇ ರೀತಿಯ ಪ್ರವೇಶ ಶುಲ್ಕವಿರುವುದಿಲ್ಲ. ಆದರೆ 21 ದಿನದ ನಿಮ್ಮ ಊಟ ವಸತಿ ವ್ಯವಸ್ಥೆಗೋಸ್ಕರ ಭಾಗಶಃ ಖರ್ಚಿನ ರೂಪವಾಗಿ ರೂ.2000ನ್ನು ನೀವು ಶಿಬಿರದ ಪ್ರಾರಂಭದ ದಿನದ ನೋಂದಣಿಯ ಸಮಯದಲ್ಲಿ ಭರಿಸಬೇಕು.
- ಎಲ್ಲಾ ಶಿಬಿರಾರ್ಥಿಗಳೂ ಕಡ್ಡಾಯವಾಗಿ ಶಿಬಿರದ 21 ದಿನವೂ ಪಾಲ್ಗೊಳ್ಳಬೇಕು ಮತ್ತು ಯಾವುದೇ ರೀತಿಯ ರಜಾವನ್ನೂ ಕೊಡಲಾಗುವುದಿಲ್ಲ.
- ಸಂಪೂರ್ಣ ಶಿಬಿರವು ಕನ್ನಡ ಭಾಷೆಯಲ್ಲಿರುವುದರಿಂದ ಕನ್ನಡದ ಜ್ಞಾನ ಅಗತ್ಯವಾಗಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಏಪ್ರಿಲ್ 2013.
Ninasam Summer Theatre Workshop
Ninasam Theatre Institute has been conducting this Summer theatre workshop for the last 4 years. This year too, the workshop is being held from 11th to 31st of May 2013 (both days included). As in the earlier workshops, the workshop sessions are conducted mainly by the teachers from the Ninasam Theatre Institute. A basic introduction to the various aspects of theatre, and some practical classes on sound, movement and design are conducted as part of the workshop. The workshop will also include a short theatre production by the participants, created during the sessions, the presentation of which will take place on the last day.
This workshop is primarily designed and intended for:
- youngsters who hope to begin their career in theatre, and
- practitioners from theatre and cultural groups who have some basic experience and propose to update their skills,
If you wish to apply, please read the following instructions carefully:
- One can either fill in and submit the application online, or can also download the application form, fill it in and send it by post to Ninasam’s address.
- Candidates must be within 18-35 age; and preferably should have completed
SSLC. - An intense interest and application in theatre practice is the basic minimum qualification, and the participants must have physical fitness to undergo rigorous workshops.
- There will be no interview and the selections are made on the basis of application.
- All the participants selected for the workshop are intimated by email/post before 30th of April 2013.
- There is no entrance fee for workshop; but, an amount of
Rs. 2000 to partially cover the food and lodge expenses for 21 days, is to be paid by all the participants, during
enrolment on the first day of the workshop at Heggodu. - All selected candidates MUST attend the full course. No holidays are given during the workshops and individual leaves are strictly not allowed.
- As this workshop is conducted in Kannada a fluent working knowledge in Kannada is essential.
Last date for applying is 20th of April 2013.

