Application for the Diploma Course 2018-19 is now close.

ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್

ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ 2018-19ನೇ ಸಾಲಿನ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿಯಿದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದ್ದು ಅಗತ್ಯ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಊಟ, ವಸತಿ ವ್ಯವಸ್ಥೆ ಇದ್ದು ಹದಿನೈದು ಮಂದಿಗೆ ವಿದ್ಯಾರ್ಥಿವೇತನ ದೊರೆಯುತ್ತದೆ. ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಮುಂತಾಗಿ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಕೇಂದ್ರದ ನುರಿತ ಅಧ್ಯಾಪಕರುಗಳಲ್ಲದೆ ಹೊರಗಿನ ತಜ್ಞರನ್ನು ಕರೆಸಿ ಸಾಕಷ್ಟು ಪ್ರಬುದ್ಧ ಶಿಕ್ಷಣ ಕೊಡಲಾಗುತ್ತದೆ. ಒಳ್ಳೆಯ ಗ್ರಂಥ ಭಂಡಾರ ಹಾಗೂ ದೃಶ್ಯಶ್ರವ್ಯ ಪರಿಕರಗಳ ಅನುಕೂಲತೆಯಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿದಿನ ಸುಮಾರು 12 (07.00 am- 09.30 pm) ಗಂಟೆಗಳಷ್ಟು ಕಾಲ ಅಭ್ಯಾಸದಲ್ಲಿ ತೊಡಗಿರಬೇಕಾಗುತ್ತದೆ.

Diploma in Theatre Arts

Recognised and aided by the Govt, of Karnataka, the Ninasam Theatre Institute at Heggodu calls for applications for the 10 months Diploma in Theatre Arts Course for the year 2018-19. Minimum qualification for admission is SSLC, but gradutes are prefered. Candidates must have a deep interest in theatre and some experience of working in the field. It is a completely residential course and all male and female students will get hostel and food facility on the campus, and the first 15 people also get a scholarship roughly to cover their basic living costs. The one year course offers both theoretical and practical training in the concepts of the theatre medium, history of drama and theatre, acting, stagecraft and theatre management. Apart from the trained staff in the Institute, teachers from outside are invited all through the year for conducting classes and productions. The Institute also has a good library and audio visual collection of material. The course will be rigorous, full time, and the students are expected work between 7 am and 9.30 pm every day, with breaks.

ನೀನಾಸಮ್ ರಂಗಶಿಕ್ಷಣ ಕೇಂದ್ರದ ಒಂದು ವರ್ಷದ ತರಬೇತಿಗೆ ಅರ್ಜಿ ಸಲ್ಲಿಸುವ ವಿಧಾನ

 • ಈ ಜಾಲತಾಣದಲ್ಲಿ ಮೂರು ಪ್ರತ್ಯೇಕ ಕಡತಗಳಲ್ಲಿರುವ ಕೇಂದ್ರದ ಪರಿಚಯ ಪತ್ರ, ಅರ್ಜಿ ಫಾರಂ, ಶುಲ್ಕ ಮತ್ತು ಸಂದರ್ಶನದ ವಿವರಗಳು – ಇವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿ.
 • ಅಂತರ್ಜಾಲದ ಸಂಪರ್ಕ ಇಲ್ಲದವರು ಕೆಳಗಿರುವ ನೀನಾಸಮ್ ವಿಳಾಸಕ್ಕೆ ಕಾಗದ ಬರೆದು ಉಚಿತವಾಗಿ ಕೇಂದ್ರದ ಪರಿಚಯ ಪತ್ರ, ಅರ್ಜಿ ಫಾರಂ, ಶುಲ್ಕ ಮತ್ತು ಸಂದರ್ಶನದ ವಿವರಗಳು – ಇವನ್ನು ತರಿಸಿಕೊಳ್ಳಬಹುದು.
 • ವಿವರಗಳನ್ನು ಓದಿ ಅರ್ಥ ಮಾಡಿಕೊಂಡು ನೀವು ಅರ್ಜಿ ಸಲ್ಲಿಸಬಹುದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
 • ಅರ್ಜಿಫಾರಂನ್ನು ಪ್ರಿಂಟ್ ಮಾಡಿಕೊಂಡು ಅದನ್ನು ನಿಮ್ಮದೇ ಹಸ್ತಾಕ್ಷರದಲ್ಲಿ ತುಂಬಿ.
 • ಅದರಲ್ಲಿರುವ ಎಲ್ಲ ಲಗತ್ತುಗಳೊಂದಿಗೆ, ರೂ. 500 ಅರ್ಜಿ ಶುಲ್ಕದ ಡಿಡಿ ಸಮೇತ (ನೀನಾಸಮ್ ರಂಗಶಿಕ್ಷಣ ಕೇಂದ್ರ ಎಂಬ ಹೆಸರಿಗೆ, ಕರ್ನಾಟಕ ಬ್ಯಾಂಕ್ ಹೆಗ್ಗೋಡು ಶಾಖೆ ಅಥವಾ ಬೇರಾವುದೇ ಬ್ಯಾಂಕಿನ ಸಾಗರ ಶಾಖೆಯಲ್ಲಿ ಸಂದಾಯವಾಗುವಂತೆ), ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ 577 417 – ಇಲ್ಲಿಗೆ ರಿಜಿಸ್ಟರ್ಡ್ ಅಂಚೆ ಮೂಲಕ ರವಾನಿಸಿ.
 • ಅಂತರ್ಜಾಲದ ಮೂಲಕ ಅಥವಾ ಈಮೈಲ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಇರುವುದಿಲ್ಲ.

Procedure for applying to one-year Diploma course at Ninasam Theatre Institute

 • Download the Prospectus, Application form and Fee and Interview details that are available in three separate files on this website for free download.
 • Those who do not have access to the web can get Prospectus, Application form and Fee and Interview details for no charge, by writing to Ninasam Theatre Institute at the address given below.
 • Confirm that you are eligible to apply, after reading all the papers.
 • Print the Application form and fill it in your own handwriting.
 • With all the necessary attachments mentioned in the form, and with an application fee of Rs. 500 on a DD (payable to Ninasam Theatre Institute, Heggodu; on Karnataka Bank, Heggodu, or any other bank at Sagara) register post this to Ninasam Theatre Institute, Heggodu, Sagara, Shimoga District, Karnataka 577 417.
 • Applications are not accepted either online or by email.

ಹೆಚ್ಚಿನ ಮಾಹಿತಿಗಾಗಿ ನಮ್ಮ ಪರಿಚಯ ಪತ್ರವನ್ನು ಡೌನ್ ಲೋಡ್ ಮಾಡಿ.

Download our prospectus for more details.

ದಯವಿಟ್ಟು ಗಮನಿಸಿ: ನೀನಾಸಮ್ ರಂಗಶಿಕ್ಷಣ ಕೇಂದ್ರವು ರಂಗಭೂಮಿಯ ವಿವಿಧ ಆಯಾಮಗಳನ್ನು ಕುರಿತ ಸಮಗ್ರ ತರಬೇತಿ ನಡೆಸುತ್ತದೆಯೆ ಹೊರತು ವಿಶೇಷವಾಗಿ ಅಭಿನಯದ ಬಗ್ಗೆಯಾಗಲೀ ಅಥವಾ ಸಿನೆಮಾ ಮತ್ತು ಟಿವಿ ನಟನೆಯ ಬಗ್ಗೆಯಾಗಲೀ ಯಾವುದೇ ರೀತಿಯ ಶಿಕ್ಷಣ ನೀಡುವುದಿಲ್ಲ.

Please note: Ninasam Theatre Institute offers an integrated training into the various aspects of theatre, and it does not give you any specialised training in acting, or any training to work in cinema and TV.

To download the following documents click on them

ನೀನಾಸಮ್ ರಂಗಶಿಕ್ಷಣ ಕೇಂದ್ರದ ಪರಿಚಯ ಪತ್ರ

Ninasam Theatre Institute Prospectus