ನೀನಾಸಮ್ ಸಂಸ್ಕ ತಿ ಶಿಬಿರ ೨೦೧೮

ಕಳೆದ ಎರಡೂವರೆ ದಶಕಗಳಿಂದ ಚಲನಚಿತ್ರ-ಸಂಸ್ಕ ತಿ ಶಿಬಿರಗಳನ್ನು ಪ್ರತಿ ಅಕ್ಟೋಬರ್‌ನಲ್ಲಿ ನಡೆಸುತ್ತ ಬಂದಿರುವ ನೀನಾಸಮ್ ಈ ವರ್ಷವೂ ಸಂಸ್ಕ ತಿ ಶಿಬಿರ ೨೦೧೮ನ್ನು ಸಂಘಟಿಸುತ್ತಿದೆ.

೨೦೧೮ ಅಕ್ಟೋಬರ್ ೬ ರಿಂದ ೧೦ರವರೆಗೆ ಐದು ದಿನ ನಡೆಯಲಿರುವ ಈ ಶಿಬಿರದಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ, ಹಾಗೂ ಒಟ್ಟೂ ಸಮಾಜದೊಂದಿಗೆ ಸಂಸ್ಕ ತಿಯ ಸಂಬಂಧ – ಈ ವಿಷಯಗಳ ಬಗ್ಗೆ ಕನ್ನಡದ ಹಾಗೂ ಹೊರನಾಡುಗಳ ಅನೇಕ ಗಣ್ಯರು ಉಪನ್ಯಾಸ, ಚರ್ಚೆ, ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ. ಒಂದು ನಿರ್ದಿಷ್ಟ ವಿಷಯವನ್ನು ಕುರಿತು ಈ ಶಿಬಿರದ ಹಲವು ಉಪನ್ಯಾಸ-ಪ್ರಾತ್ಯಕ್ಷಿಕೆಗಳು ಯೋಜಿತವಾಗಿದ್ದು, ಈ ಬಾರಿ `ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟು’ ಎಂಬುದು ಶಿಬಿರದ ಕೇಂದ್ರ ವಿಷಯವಾಗಿರುತ್ತದೆ. ಪ್ರತಿದಿನ ಸಂಜೆ ನೀನಾಸಮ್ ಮತ್ತು ಆಹ್ವಾನಿತ ನಾಟಕ ತಂಡಗಳ ನಾಟಕೋತ್ಸವವನ್ನು ಕೂಡಾ ಏರ್ಪಡಿಸಲಾಗಿದೆ.

ಗ್ರಾಮೀಣ ಮತ್ತು ನಗರೇತರ ಪ್ರದೇಶಗಳಲ್ಲಿ ಸಾಂಸ್ಕ ತಿಕ ಚಟುವಟಿಕೆಗಳನ್ನು ಸಂಘಟಿಸಲು ಆಸಕ್ತಿಯಿರುವವರಿಗಾಗಿ ಈ ಶಿಬಿರ ವಿಶೇಷವಾಗಿ ಯೋಜಿಸಲ್ಪಟ್ಟಿದ್ದು ಅಂಥ ಸಾಂಸ್ಕೃತಿಕ ಸಂಘಟನೆಗಳ ಕಾರ್ಯಕರ್ತರು, ಸಂಸ್ಕ ತಿಯ ಬಗ್ಗೆ ಆಸಕ್ತಿಯಿರುವ ಉಪಾಧ್ಯಾಯರು, ವಿದ್ಯಾರ್ಥಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಮತ್ತು ಒಟ್ಟೂ ಸಾಂಸ್ಕ ತಿಕ ಮಾಧ್ಯಮಗಳಲ್ಲಿ ಆಸಕ್ತಿಯಿರುವ ಇತರರೂ ಈ ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರದ ಹಲವು ಉಪನ್ಯಾಸಗಳನ್ನು ಕನ್ನಡದಲ್ಲೇ ಯೋಜಿಸಲಾಗದೆಯಾದರೂ ಕೆಲವು ಉಪನ್ಯಾಸಗಳು ಅನಿವಾರ್ಯವಾಗಿ ಇಂಗ್ಲಿಷಿನಲ್ಲಿ ನಡೆಯುತ್ತವೆ.

ಆಯ್ಕೆಯಾದವರಿಗೆ ಆ ಬಗ್ಗೆ ಸೂಚನೆ ಕೊಡಲಾಗುವುದು.
ಶಿಬಿರಕ್ಕೆ ಬರುವ ಎಲ್ಲ ಅಭ್ಯರ್ಥಿಗಳು ಶಿಬಿರದ ಅಷ್ಟೂ ದಿನ ಭಾಗವಹಿಸುವುದು ಅಗತ್ಯ. ಭಾಗಶಃ ಪಾಲ್ಗೊಳ್ಳುವುದಕ್ಕೆ ಅವಕಾಶವಿಲ್ಲ.

ಶಿಬಿರದ ಎಲ್ಲ ದಿನಗಳ ಊಟ-ವಸತಿ ಮತ್ತು ಸಂಜೆಯ ಕಾರ್ಯಕ್ರಮಗಳಿಗೆ ಪ್ರವೇಶ ಸೇರಿ ಒಟ್ಟು ಶುಲ್ಕ ರೂ. ೪,೫೦೦-೦೦ (ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ ಸಲ್ಲಿಸುವ ವಿದ್ಯಾರ್ಥಿಗಳಿಗೆ ರೂ. ೩,೫೦೦).

ಈ ಹಣವನ್ನು ಅಭ್ಯರ್ಥಿಪತ್ರದ ಜತೆಗೆ ಅಥವಾ ಆಮೇಲೆ ನಮ್ಮಿಂದ ಪತ್ರ ಬಂದಮೇಲೆ ನೀನಾಸಮ್, ಹೆಗ್ಗೋಡು ಎಂಬ ಹೆಸರಿಗೆ ಕರ್ನಾಟಕ ಬ್ಯಾಂಕ್, ಹೆಗ್ಗೋಡು ಅಥವಾ ಬೇರಾವುದೇ ಬ್ಯಾಂಕಿನ ಸಾಗರ ಶಾಖೆಗೆ ಡಿ.ಡಿ. ತೆಗೆಸಿ ಕಳಿಸಬೇಕು.
ನೀನಾಸಮ್‌ನ ಅಂತರ್ಜಾಲ ತಾಣದಲ್ಲೂ ಕೂಡ (ಇಲ್ಲಿ) ಅಭ್ಯರ್ಥಿ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು; ಅಥವಾ ನೇರವಾಗಿ ಅಂತರ್ಜಾಲದಲ್ಲೇ (ಇಲ್ಲಿ) ಅಭ್ಯರ್ಥಿ ಪತ್ರವನ್ನು ತುಂಬಿ ಸಲ್ಲಿಸಬಹುದು.

ವಿಳಾಸ : ನೀನಾಸಮ್, ಹೆಗ್ಗೋಡು, ಸಾಗರ ಕರ್ನಾಟಕ ೫೭೭ ೪೧೭

ಸೂಚನೆ: ಸರಿಯಾದ ದೂರವಾಣಿ ಸಂಖ್ಯೆ ಮತ್ತು ಇಮೇಲ್ ಐಡಿ ನೀಡುವುದು ಕಡ್ಡಾಯ. ಈ ಮೂಲಕವೇ ನಿಮಗೆ ಶಿಬಿರದ ಬಗ್ಗೆ ಮಾಹಿತಿ ನೀಡಲಾಗುವುದು. ಈ ಎರಡೂ ಮಾಹಿತಿ ಸರಿಯಿಲ್ಲದಿದ್ದಲ್ಲಿ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.

NINASAM Samskriti Shibira 2018

One of Ninasam’s important activities for more than last 2 decades has been the Samskriti Shibira, conducted every October.

This year, in 2018, Ninasam plans to conduct the Samskriti Shibira from 6th to 10th October (5 days). Several important writers and thinkers from Karnataka and elsewhere will be taking part as resource persons, and some 150 participants are likely to attend the course. The Course is designed around a specific theme every year, and organised as a combination of special lectures on the theme, lecture-demonstration-discussions on fundamentals of appreciation of art forms like literature, theatre, film, music, dance, and so on -all this during the day-sessions, and a series of performances in the evenings.

Fee towards board, lodging & entrance: Rs. 4,500 (for 5 days)

Concessional Fee for students: Rs. 3,500 (A letter from the head of the educational Institution to be submitted)

Those who wish to attend the course could get the application from the web or from Ninasam office and post the filled in application to Ninasam, Heggodu, Sagara, Shimoga – 577 417

Information to Participants

  • This workshop is intended primarily for cultural activists from rural and semi urban parts of Karnataka. But it is open to anyone who has a general interest in cultural activities. Some lectures and presentations will be in English, and a Kannada translation is provided when necessary.
  • Many of the sessions and performances in the workshop will be in Kannada, and therefore, those who can not understand Kannada will have a disadvantage.
  • All participants must attend all the days; partial participation is not allowed.
  • Total Fee to cover food, lodging and entrance fee for evening programme for all 5 days is Rs. 4,500. Students, with certificates from the heads of institutions pay a concessional fee of Rs. 3,500.  This has to be paid through a DD in favour of Ninasam, Payable at Karnataka Bank, Heggodu or any other banks, at Sagara (Shimoga district, Karnataka) branch.

Contact: NINASAM, HEGGODU, SAGARA, KARANTAKA 577 417;

Phone: 08183-265646;
Email: culturecourse@ninasam.org

NOTE: It is mandatory to provide the phone number and email address correctly; through which we can provide you the information about the Culture Course. In case those details are inaccurate, the application will not be accepted.

Resource Persons (Tentative List)

Tridip Suhrud

Calude Alvares

Norma Alvares

Samik Bandopadhyay

Chandrashekhara Kambar

Gopal Guru

Prakash Amte

Prithvidatta Chandrashobhi

Sundar Sarukkai

Atul Tiwari

Sadananda Mayya

Vaidehi

Vivek Shanabhag

Shivananda Kalave

G.S. Jayadev

Sanjiv Kulakarni

Deepa Ganesh

Sukanya Ramgopal

N.S. Gundur

Jayaram Patil – and others.

T.P. Ashok and Jaswanth Jadhav (Course Coordinators)

Evening programs (7.15 pm onwards: for public):

6 Oct. Tirugata Play: Setubandhana directed by Akshara K.V.

7 Oct. Tirugata Play: Ascharya Choodamani directed by Joseph John

8 Oct. Ninasam Play: Oedipus directed by Ganesh Mundadi

9 Oct. Invited Tamil Play: Poozippaavai directed by Muruga Bhupati Shanmugam

10 Oct. Invited Play: Kola by Theatre Tatkal, directed by Achyuta Kumar.

 

Afternoon Presentations (2.30 to 4 pm: for course participants only)

6 Oct. Music/story presentation: Yellamma Stories (Kannada) by Urban Folk Project, Bangalore

7 Oct. Short Play: Naribai (Hindi) by Susmita Mukherjee, Mumbai

8 Oct. Short Play: Mohanaswami (Kannada) by Atamata, Dharawada

9 Oct. Short Play: Maduve Hennu (Kannada) by Theatre Samurai

10 Oct. Short Play: Walk (English) by Maya Rao, New Delhi.

Kannada application for Ninasam Cultute Course 2018

English application for Ninasam Culture Course 2018